Dont miss to watch Puneetha Rajkumar Special Dance. Must watch video and subscribe to Filmibeat Kannada
ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಹೆಸರಲ್ಲೇ ಪವರ್ ಇಟ್ಟುಕೊಂಡಿದ್ದರೂ ಅತ್ಯಂತ ಸರಳ ವ್ಯಕ್ತಿತ್ವದವರು. ಶೂಟಿಂಗ್ ಸಮಯದಲ್ಲಿರಲಿ, ಅಭಿಮಾನಿಗಳು ಭೇಟಿಯಾದಾಗ, ಮಾತನಾಡಿಸುವಾಗ ಆಗಲೀ ಅಥವಾ ಯಾವುದೇ ಕಾರ್ಯಕ್ರಮದಲ್ಲಾಗಲೀ ಅಪ್ಪು ಎಂದಿಗೂ ಅಹಂ ತೋರಿದವರಲ್ಲ.
ಅದಕ್ಕೆ ತಾಜಾ ಉದಾಹರಣೆಯೊಂದು ಇಲ್ಲಿದೆ ನೋಡಿ. ಮೊನ್ನೆ ತಾನೇ ಅಪ್ಪು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ‘ಡ್ಯಾನ್ಸ್ ಡ್ಯಾನ್ಸ್ ಜೂನಿಯರ್’ ರಿಯಾಲಿಟಿ ಶೋಗೆ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದರು.
ಮಕ್ಕಳ ಡ್ಯಾನ್ಸ್ ನೋಡುವುದೆಂದರೆ ಅಪ್ಪುಗೆ ಬಲು ಇಷ್ಟ ಅಂತೆ. ಅದೇ ರೀತಿ ಅಪ್ಪು ಈ ಕಾರ್ಯಕ್ರಮದಲ್ಲಿ ಅಜ್ಜಿ ಜೊತೆ ಹೆಜ್ಜೆ ಹಾಕಿದ್ದಾರೆ. ಅಜ್ಜಿಯ ಮೊಮ್ಮಗಳು ರಿಯಾಲಿಟಿ ಶೋನಲ್ಲಿ ಸ್ಪರ್ಧಿ. ಅಜ್ಜಿಗೆ ಡ್ಯಾನ್ಸ್ ಅಂದರೆ ಬಲು ಇಷ್ಟ. ಈ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ನೆನಪಿರಲಿ ಪ್ರೇಮ್, ಅಪ್ಪು ಅವರನ್ನು ಅಜ್ಜಿ ಜೊತೆ ಒಂದು ಸ್ಟೆಪ್ ಹಾಕುವಂತೆ ಕೇಳಿಕೊಂಡ ಕೂಡಲೇ, ದೊಡ್ಮನೆ ಹುಡುಗ ಸೀದಾ ವೇದಿಕೆ ಏರಿದರು.
ಅಜ್ಜಿ ಜೊತೆ, ನೀನೆ… ನೀನೇ… ನನಗೆಲ್ಲಾ ನೀನೆ… ಹಾಡು ಹಾಗೂ ‘ಬಿಂಕದ ಸಿಂಗಾರೀ…’ ಹಾಡಿಗೆ ಹೆಜ್ಜೆ ಹಾಕಿದರು. ಅದೇ ರೀತಿ ಅಜ್ಜಿ ಜೊತೆ ಡ್ಯಾನ್ಸ್ ಮಾಡಲಿಕ್ಕೆ ಅವಕಾಶ ಕೊಟ್ಟಿದ್ದಕ್ಕಾಗಿ ಅಜ್ಜಿಯ ಪತಿ ದೇವರಿಗೆ ಅಪ್ಪು ಥ್ಯಾಂಕ್ಸ್ ಹೇಳಿದ್ದಾರೆ.
ಯಾವಾಗಲೂ ಡ್ಯಾನ್ಸ್ ಮಾಡ್ತಾ ಇರಿ, ಖುಷಿ ಖುಷಿ ಆಗಿರಿ ಅಂತ ಅಪ್ಪು ಅಭಿಮಾನಿಗಳಿಗೆ ಹೇಳಿದ್ದಾರೆ. ಅಂದ ಹಾಗೆ ಅಪ್ಪು ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ ಕಾರ್ಯಕ್ರಮಕ್ಕೆ ಬಂದಿರುವ ಎಪಿಸೋಡ್ ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.